ಕಣ್ಣು ಕೀಳಿಸಿಕೊಂಡ ಅಮರ ಪ್ರೇಮಿ "ರಘು"
ಗೆಳೆಯರೇ,
ಪ್ರೇಮಿ ಮದುವೆ ನೋಡಲು ಹೋದ "ರಘು" ಎಂಬ ಹುಡುಗನ ಕಣ್ಣು ಕಿತ್ತ ಬಗ್ಗೆ ನೀವೆಲ್ಲಾ ನಮ್ಮ ಟಿವಿ ವಾಹಿನಿಗಳ ಮೂಲಕ ನೋಡಿರುತ್ತೀರಿ.
ಇಲ್ಲಿ ಯಾರದು ತಪ್ಪು ? ಯಾರದು ಸರಿ ? ಅನ್ನೋ ವಿಚಾರ ಒಂದು ಕಡೆಯಾದರೆ,
ಇಲ್ಲಿ "ರಘು" "ಅನುಷಾ" ಪ್ರೀತಿಸಿದರು, ಮದುವೆಯಾದರು ಅನ್ನೋ ವಾದ ಒಂದು ಕಡೆಯಾದರೆ ?
ಮದುವೆನೇ ಆಗಿಲ್ಲ. ನಾನು ಪ್ರೀತಿಸಿಯೇ ಇರಲಿಲ್ಲ ಅನ್ನೋದು ಇನ್ನೊಂದು ವಾದ ?
ತನ್ನ ಸ್ವಯಂಕೃತ ಅಪರಾಧದಿಂದ ತನ್ನ ಗೆಳೆತಿಯ ಮದುವೆ ಅಂತ ಗೊತ್ತಿದ್ದರೂ ಸಹ ಗೆಳೆಯರೊಂದಿಗೆ ಮದುವೆಗೆಹೋಗಿದ್ಯಾಕೆ?
ಅದರ ಪ್ರತಿಫಲ ಕಣ್ಣು ಕೀಳಿಸಿಕೊಂಡಿದ್ದು. ಈ ಪ್ರಕರಣ ಇಂದಿನ ಇತಿಹಾಸದಲ್ಲಿ ನಡೆದಿಲ್ಲವೆಂಬುದು ನಿಜ.
ಈ ಮಾಧ್ಯಮಗಳು, ರಘುವಿಗೆ ಜನರಿಂದ ಹಣದ ಸಹಾಯ ಮಾಡುವಂತೆ ಮಾಡಿದವು.
ಒಂದು ಹೆಜ್ಜೆ ಮುಂದೆ ಹೋಗಿ
ರಘುವಿಗೆ "ರೇಣುಕಾ" ಎಂಬ ಹುಡುಗಿಯೂ ತಾನೂ ಮದುವೆಯಾಗುವುದಾಗಿ ಬಂದಿರುವುದಾಗಿಯೂ 2 ಗಂಟೆಗಳ ಕಾರ್ಯಕ್ರಮವನ್ನು ಮಾಡಿದವು.
ತಾನು ಸಾಧಿಸಬೇಕು ಅಂತ "ತಾನೂ ಇಂತದ್ದೇ ಜಿಮ್" (ಸುಮಾರು 15 ಲಕ್ಷ ವೆಚ್ಚದ) ತೆರೆಯಬೇಕು ಅಂತ ಹಠಕ್ಕೆ ಬಿದ್ದು ಚಿತ್ರನಟರ, ಗೃಹ ಸಚಿವರ ಸಮ್ಮುಖದಲ್ಲಿ ಪ್ರಾರಂಭನೂ ಮಾಡಿದ್ದಾಯಿತು.
ಒಬ್ಬ ಕಣ್ಣು ಕಳೆದುಕೊಂಡಿದ್ದಕ್ಕೆ ಈ ಮಾಧ್ಯಮಗಳು ಇಷ್ಟೆಲ್ಲಾ ಪ್ರಚಾರ ಮಾಡಿದವು. ಆದರೆ ಹುಟ್ಟಿನಿಂದಲೇ ಕುರುಡರಾಗಿ, ಕಿವುಡರಾಗಿ, ಕುಂಟರಾಗಿ, ಅಂಗವಿಕಲರಾಗಿ ಜೀವನದ ಉದ್ದಕ್ಕೂ ಸುಖವನ್ನೇ ಕಾಣದೇ ನೋವನ್ನೇ ಅನುಭವಿಸುತ್ತಿರುವಅದೆಷ್ಟೋ ಲಕ್ಷಾಂತರ ಅಂಗವಿಕಲರು ಸರಕಾರ ನೀಡುವ ಅಂಗವಿಕಲ ಭತ್ಯೆಗಳನ್ನು ನಂಬಿಕೊಂಡು ಸ್ವತಂತ್ರವಾಗಿ ಜೀವನನಡೆಸುತ್ತಿದ್ದಾರೆ. ಅಂತಹವರ ಬಗ್ಗೆ ಯಾವ ಮಾಧ್ಯಮ ಗಳವರು ಸ್ಪಂದಿಸಿದ್ದಾರೆ.
ಅದೆಷ್ಟು ಜನ ಅಂಗವಿಕಲರಿಗೆ ಹಣ ಸಹಾಯ, ಸ್ವಯಂ ಉದ್ಯೋಗಕ್ಕೆ ಸಹಾಯ ಹಸ್ತ ನೀಡಿದ್ದಾರೆ. ಅದೆಷ್ಟುಜನ ಅಂಗವಿಕಲರಿಗೆ "ಹೆಣ್ಣುಗಳನ್ನು ನೋಡಿ ಮದುವೆಗೆ ವೇದಿಕೆ ಸೃಷ್ಠಿಸಿದ್ದಾರೆ" ಹೇಳಲಿ.
ತನ್ನ ಸ್ವಯಂಕೃತ ಅಪರಾಧದಿಂದ ಮದುವೆಯಾಗಿ ಬೇರೆಂದೂ ಮನೆಗೆ ಹೊರಟಿದ್ದ
ತನ್ನ ಪ್ರೇಮಿ ಅಂತ ಹೇಳುವ ಅನುಷಾಳ ಮದುವೆಗೆ ಹೋಗಿ ಅವಳ ಜೀವನವನ್ನು ಹಾಳು ಮಾಡಿ,
ರಘು ಮದುವೆಗೆ ಹೋಗಿದ್ದರ ಪರಿಣಾಮ ಅನುಷಾಳ ತಂದೆ, ಅಣ್ಣ, ಸಂಬಂಧಿಕರು ಜೈಲು ಪಾಲಾಗಿ ಅಪರಾಧಿಗಳಾದರು. ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ ಅಂತ ಹೇಳುವ ರಘು ಅನುಷಾಳ ಜೀವನದಲ್ಲಿ ಅವಳ ಗಂಡನ ಮನಸ್ಸಿನಲ್ಲಿ ಶಾಶ್ವತಬಿರುಕು ಮೂಡಿಸುವಲ್ಲಿ ಕಾರಣಕರ್ತನಾದ,
ಇಷ್ಟೆಲ್ಲಾ ಅನಾಹುತಗಳಿಗೆ ಕಾರಣಕರ್ತ "ರಘು" ತಾನೇ? ನನಗೂ ಅನುಕಂಪವಿದೆ. ಇಂತಹ ಪಾಪ ಯಾರೂ ಮಾಡಬಾರದು. ಆದರೆ ಇದಕ್ಕೆ ಹೊಣೆ ಯಾರು?
ಇದನ್ನು ಮಾಧ್ಯಮಗಳು ಅರಿತರಾ? ತನ್ನ ತಪ್ಪಿನಿಂದ ಆದ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣಕರ್ತನಾದರೂ ತಾನೂ ಐಶಾರಾಮಿಯಾಗಿಯೇ ಜೀವನ ನಡೆಸಬೇಕು. ಇಂತದ್ದೇ ಜಿಮ್ ಮಾಡಬೇಕು ಅನ್ನೋ ಹಠ ಯಾಕೆ ಬೇಕು?
"ರೇಣುಕಾ" ಎಂಬ ಹುಡುಗಿ ಮದುವೆಯಾಗಲು ಬಂದ ಸುದ್ಧಿ.
ಈಗಾಗಲೇ ಒಂದು ಹೆಣ್ಣಿನ ಜೀವನ ಹಾಳಾಗಿದೆ. ಜೀವನದ ಉದ್ದಕ್ಕೂ ಕೊರಗುವಂತೆ ಮಾಡಿಯಾಗಿದೆ.
ಈಗ ಈ ಹುಡುಗಿಯ ಜೀವನ ಹಾಳಾಗಬೇಕಾ?
ಜೀವನ ನಡೆ ಸಲು ಐಶಾರಾಮಿ (15 ಲಕ್ಷ) ಜಿಮ್ ಬೇಕು. ಮದುವೆ ಯಾಗಲು ಒಳ್ಳೆಯಹುಡುಗಿನೇ ಬೇಕು.
ಹುಮ್ಮಸ್ಸಿನಲ್ಲಿ ಆ ಹುಡುಗಿ ಪ್ರಚಾರಕ್ಕೆ ಬಂದಿರಬಹುದೇನೋ? ನಾಳೆ ವೈವಾಹಿಕ ಜೀವನ ಹೇಗಿರುತ್ತೆ. ಹೇಳಿ?
ಒಬ್ಬ ಅಂಗವಿಕಲನಾದವನು ಸರಿಯಾದ ಹೆಣ್ಣನ್ನು ಮದುವೆಯಾದರೆ ಸಮಾಜದಲ್ಲಿ ಅನುಭವಿಸುವಂತಹ ಮಾನಸಿಕ ನೋವುಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತೆ.
ಯಾಕೆ "ರಘು"ವಿಗೆ ಒಂದು ವಿಧವೆಯಂತಹ ಅಥವಾ ಜೀವನದಲ್ಲಿ ನೊಂದಂತಹ ಹೆಣ್ಣು ಮಗಳನ್ನು ಮದುವೆಯಾಗುವುದಕ್ಕೆಆಗುವುದಿಲ್ಲವೇ?
ಈ ಮನಸ್ಸು ಯಾಕೆ ಬರಲಿಲ್ಲ. ನಮ್ಮ ಮಾಧ್ಯಮಗಳು ತಮ್ಮ ಪ್ರಚಾರಕ್ಕೆ ವಾಸ್ತವವಲ್ಲದ್ದನ್ನು ತೋರಿಸಿ. ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಅಲ್ಲವೇ?
"ಹೇಳಿ ಗೆಳೆಯರೇ, ಇದು ನಾನು ಯಾರ ಮೇಲೂ ದೂರುವಂತಹ ವಿಷಯವಲ್ಲ. ನಿಜಾಂಶ" ರಘುವಿನ ಸ್ಥಿತಿಯ ಬಗ್ಗೆ ನನಗೆ ಅನುಕಂಪವಿದೆ. ಒಂದು ಸಂಗಾತಿ ಬೇಕು ನಿಜ. ( ಇದೇ ಮಾಧ್ಯಮಗಳು ಸ್ವಲ್ಪ ಶ್ರಮ ವಹಿಸಿದ್ದರೆ, ರಘು, ಅನುಷಾರ ಪ್ರೀತಿಯಬಗ್ಗೆ ತಿಳಿದುಕೊಳ್ಳಬಹುದಿತ್ತು. ಅವರ ಧರ್ಮಸ್ಥಳದ ಮದುವೆಯ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಅದು ನಿಜವಾಗಿದ್ದೆ ಆದರೆಜಗಜಾಹೀರಾದ ವಿಷಯ ಅನುಷಾಳ ಮನನೊಲಿಸಿ,, ಇಬ್ಬರನ್ನು ಒಂದು ಗೂಡಿಸಬಹುದಿತ್ತು. ಮದುವೆನೂ ಮಾಡಿಸಬಹುದಿತ್ತು. "
ರಘುವೂ ಅಷ್ಟೆ. ತನಗಾದ ಅನ್ಯಾಯವನ್ನೇ ಮುಂದಿಟ್ಟುಕೊಂಡು ತಾನೂ ಸಾಧಿಸುತ್ತೇನೆ ಅಂತ ಹೇಳಿ ಜನರಿಂದ ಹಣ ಪಡೆದು, ತಾನು ಮನೆ ಮಾರಿ ಹಣ ಹಾಕಿದೆ ಜಿಮ್ ಮಾಡಿದೆ ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ. ಯಾರದೇ ನೆರವಿಲ್ಲದೇ, ಹುಟ್ಟಿನಿಂದ ಅಂಗವಿಕಲರಾಗಿಯೂ ತಮ್ಮ ದುಡಿಮೆಯಿಂದ ತಮ್ಮ ಜೀವನವನ್ನು ಕಟ್ಟಿಕೊಂಡು ಸಾಧಿಸುತ್ತಿದ್ದಾರಲ್ಲ.
ಹುಟ್ಟುಕುರುಡರು ಸಿದ್ದರಾಜು ಅಂತ ಧಾರವಾಡದ ಬಡತನ ದಕುಟುಂಬದಲ್ಲಿ ಹುಟ್ಟಿದವರು ಹೆತ್ತವರು ಕುರುಡ ಅಂತ ಬೀದಿಗೆ ತಳ್ಳಿದರು. ಆದರು ಅಲ್ಲಿ ಇಲ್ಲಿ ಕಷ್ಟ ಪಟ್ಟುಓದಿ ಪದವಿಗಳನ್ನು ಪಡೆದು ಒಬ್ಬ ಸಾಮಾನ್ಯ ವ್ಯಕ್ತಿ ಇಂಟರ್ ನ್ಯಾಷನಲ್ ಟಿವಿಚಾನೆಲ್ ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಪೂಜ್ಯ ಪುಟ್ಟರಾಜ ಗವಾಯಿಗಳು ಮಾಡಿದ ಸಾಧನೆಇವುಗಳು ಹಠದ ಸಾಧನೆಗಳಾಗುತ್ತವೆ.
ಇನ್ನು ಮುಂದಾದರೂ ವಾಸ್ತವದ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಗಳನ್ನು ತಿಳಿದು ವರದಿಗಳನ್ನು ಮಾಡಲಿ.
ಜಿಮ್ ಪ್ರಾರಂಭೋತ್ಸವ ಆಯಿತು.
ಮುಂದೆ ಮಾಧ್ಯಮಗಳ ಪುರೋಹಿತ್ಯದಲ್ಲಿ "ರಘು ಮತ್ತು ರೇಣುಕ"ರ ವಿವಾಹವನ್ನೂ ಮಾಡಿಸಿಬಿಡುತ್ತೀರಿ ಅಲ್ಲವೇ?
ಲಕ್ಷಾಂತರ ಜನ ಹುಟ್ಟು ಕುರುಡರು, ಕುಂಟರು, ಕಿವಿಡರು, ಮಾನಸಿಕ ಅಸ್ವಸ್ಥರು, ಈ ಭೂಮಿ ಮೇಲೆ ಇದ್ದಾರೆ. ಅನ್ನೋದನ್ನುಮರೆಯಬೇಡಿ. ಅವರೂ ಮನುಷ್ಯರೇ. ನಿಮ್ಮ ಕೈಲಾದರೆ ಅಂತಹವರಿಗೆ ಸಹಕಾರ ನೀಡಿ. ಸಾರ್ಥಕವಾಗುತ್ತೆ.
ತಪ್ಪು ಅಂತ ಕಂಡದ್ದನ್ನು ಬರೆದಿದ್ದೇನೆ.
ರಾಜು ವಿನಯ್ ದಾವಣಗೆರೆ
